Phone : +91 0824 2230452
EMAIL : info@shakthi.net.in

ಶಕ್ತಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯಿಂದ ವಚನಗಳಲ್ಲಿ ಜೀವನ ಮೌಲ್ಯ ಉಪನ್ಯಾಸ

ಮಂಗಳೂರು ನ. 16 : ಶಕ್ತಿನಗರದಲ್ಲಿ ಮಹಾಜಗದ್ಗುರು ಬಸವಣ್ಣ ಚಾರಿಟೇಬಲ್ ಟ್ರಸ್ಟ್ ಹಾಗೂ ಶಕ್ತಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯಿಂದ ದಿನಾಂಕ 18-11-2018 ಭಾನುವಾರ ಪೂರ್ವಾಹ್ನ 11 ರಿಂದ 12.30 ರ ತನಕ ಅನುಭಾವ ಸಂಗಮ ಕಾರ್ಯಕ್ರಮ ನಡೆಯಲಿದೆ. ಅಂದು ವಚನಗಳಲ್ಲಿ ಜೀವನ ಮೌಲ್ಯಗಳು ಎಂಬ ಉಪನ್ಯಾಸವನ್ನು ಶರಣ ಜಗನ್ನಾಥಪ್ಪ ಪನ್ಸಾಲೆ, ಜನವಾಡಾ ನಡೆಸಿಕೊಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಕ್ತಿ ಪ. ಪೂ. ಕಾಲೇಜಿನ ಪ್ರಾಚಾರ್ಯ ಪ್ರಭಾಕರ ಜಿ.ಎಸ್. ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ. ಸಿ. ನಾಯ್ಕ್,  ಕಾರ್ಯದರ್ಶಿ ಬೈಕಾಡಿ ಜನಾರ್ದನ ಆಚಾರ್, ಕೋಶಾಧಿಕಾರಿ ರಮೇಶ ಕೆ., ಅನುಭಾವ ಸಂಗಮ ದ.ಕ. ಘಟಕ ಅಧ್ಯಕ್ಷರಾದ ಶರಣ ಗುಂಡಪ್ಪ ವಿಠಲಾ ಉಪಸ್ಥಿತರಿರುತ್ತಾರೆ ಹಾಗೂ ಕನ್ನಡ ತುಳು ವಚನಗಳ ಗಾಯನವನ್ನು ಶ್ರೀಮತಿ ರತ್ನಾವತಿ ಬೈಕಾಡಿ ನಡೆಸಲಿದ್ದಾರೆ.