Phone : +91 0824 2230452
EMAIL : info@shakthi.net.in

ಶಕ್ತಿ ವಸತಿಯುತ ಶಾಲೆ ಹಾಗೂ ಶಕ್ತಿ ಪ. ಪೂ. ಕಾಲೇಜಿಗೆ ಶಿಕ್ಷಣ ತಜ್ಞರು ಹಾಗೂ ಗಣ್ಯರ ಭೇಟಿ

ಮಂಗಳೂರು ನ. 1೦ : ಶಕ್ತಿನಗರದ ಶಕ್ತಿ ವಸತಿಯುತ ಶಾಲೆ ಹಾಗೂ ಶಕ್ತಿ ಪ. ಪೂ. ಕಾಲೇಜಿಗೆ ದೆಹಲಿ, ಮಧ್ಯಪ್ರದೇಶ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಶಿಕ್ಷಣ ತಜ್ಞರು, ವಿದ್ಯಾರ್ಥಿ ಸಂಘಟಣೆಯ ಪ್ರಮುಖರು ಭೇಟಿ ನೀಡಿ ಶಾಲೆಯ ಮೂಲಭೂತ ಸೌಕರ್ಯಗಳನ್ನು ವೀಕ್ಷಿಸಿದರು.

ಶಿಕ್ಷಣ ತಜ್ಞರಾದ ವಿದ್ಯಾಭಾರತಿ ಕ್ಷೇತ್ರಿಯ ಸಂಘಟನಾ ಕಾರ್ಯದರ್ಶಿ ಜಿ.ಆರ್. ಜಗದೀಶ್ ಮಾತನಾಡಿ ಒಂದು ಶಿಕ್ಷಣ ಸಂಸ್ಥೆ ಹೇಗೆ ಬೆಳೆಯಬಹುದು ಎಂಬುವುದು ಆ ಶಾಲೆಯ ಶೌಚಾಲಯ, ತರಗತಿ ಕೊಠಡಿಗಳಿಗೆ ಬೆಳಕು ಹಾಗೂ ಗಾಳಿ ಬರುವ ವ್ಯವಸ್ಥೆ, ಉಪನ್ಯಾಸಕರ ಕೊಠಡಿ, ಮೈದಾನ ಗ್ರಂಥಾಲಯ, ವಸತಿ ನಿಲಯ, ಅಡುಗೆ ಕೋಣೆ, ನೋಡಿದಾಗ ಗೊತ್ತಾಗುತ್ತದೆ. ಆ ಎಲ್ಲಾ ವ್ಯವಸ್ಥೆಯು ಶಕ್ತಿ ವಸತಿಯುತ ಶಾಲೆಯಲ್ಲಿರುವುದರಿಂದ ಮಕ್ಕಳಿಗೆ ಓದುವ ಎಲ್ಲಾ ವಾತಾವರಣ ಇಲ್ಲಿದೆ ಎಂದು ಹೇಳಿದರು.

ಭಾರತೀಯ ಮಜ್ದೂರು ಸಂಘದ ಅಖಿಲ ಭಾರತೀಯ ಸಂಘಟನಾ ಕಾರ್ಯದರ್ಶಿ ಕೆ. ಸುರೇಂದ್ರನ್ ಮಾತನಾಡಿ ವಿದ್ಯಾರ್ಥಿಗಳ ವಿಕಾಸಕ್ಕೆ ಅಧ್ಯಾಪಕರ ಪಾಠದ ಜೊತೆ ವ್ಯಕ್ತಿತ್ವ ವಿಕಸನಕ್ಕೆ ಒತ್ತು ಕೊಡಬೇಕು. ಇಂತಹ ಕೆಲಸವು ಈ ಶಾಲೆಯಲ್ಲಿ ನಡೆಯುತ್ತಿದೆ ಎಂದು ಸಂಸ್ಥೆಯ ಸಂಚಾಲಕರಾದ ಸಂಜೀತ್ ನಾಯ್ಕ್ ತಿಳಿಸಿದರು.

ಸಂಸ್ಥೆಯು ಸಮಾಜದಲ್ಲಿ ಉನ್ನತ ಸ್ಥಾನ ಹಾಗೂ ಹೆಸರನ್ನು ಪಡೆಯಲು ಯಾವ ರೀತಿ ಕೆಲಸ ಮಾಡಬೇಕೆಂದು ಎಬಿವಿಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಕೆ.ಎನ್. ರಘುನಂದನ್ ಹಾಗೂ ಲಕ್ಷ್ಮಣ ಇವರು ತಿಳಿಸಿದರು. ಈ ಸಂದರ್ಭದಲ್ಲಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಸಿ ನಾಯ್ಕ್ ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾರ್ಥಿಗಳಿಗೆ ಬೇಕಾಗುವ ಆಟೋಟ ಸ್ಪರ್ಧೆಗಳಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಅಂಜು ಆಳ್ವ, ಕೇಂದ್ರ ಸೆನ್ಸರ್ ಬೋರ್ಡ್‌ನ ಸದಸ್ಯೆ ಹರಿಣಿ ರಾಯಸಂ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾದ ಹರೀಶ್ ಆಚಾರ್ಯ, ವಕೀಲರಾದ ರವಿಚಂದ್ರ ಪಿ.ಎಮ್, ವಕೀಲರಾದ ವಿಶ್ವನಾಥ, ಬೆಂಗಳೂರಿನ ವಿನಯ, ಬಾಲಕೃಷ್ಣ, ರಾಮು, ಶಕ್ತಿ ಎಜ್ಯುಕೇಶನ್ ಟ್ರಸ್ಟ್‌ನ ಆಡಳಿತಾಧಿಕಾರಿ ಬೈಕಾಡಿ ಜನಾರ್ದನ ಆಚಾರ್, ಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ್ ಕೆ, ಶಕ್ತಿ ಪ ಪೂ ಕಾಲೇಜಿನ ಪ್ರಾಂಶುಪಾಲರಾದ ಪ್ರಭಾಕರ ಜಿ.ಎಸ್, ಸಂಸ್ಥೆಯ ಅಭಿವೃದ್ಧಿ ಅಧಿಕಾರಿ ನಸೀಮ್ ಬಾನು ಉಪಸ್ಥಿತರಿದ್ದರು.