Phone : +91 0824 2230452
EMAIL : info@shakthi.net.in

ಅನಂತ ಕುಮಾರ್ ದೇಶಕ್ಕೆ ಮಾದರಿ ರಾಜಕಾರಣಿ  – ತೇಜಸ್ವಿನಿ ರಮೇಶ್

ಮಂಗಳೂರು ನ. 12 : ಶಕ್ತಿ ವಸತಿಯುತ ಶಾಲೆ ಮತ್ತು ಶಕ್ತಿ ಪ. ಪೂ. ಕಾಲೇಜು ವತಿಯಿಂದ ಇಂದು ಬೆಳಗ್ಗೆ ಕೇಂದ್ರ ಸಚಿವರಾದ ಶ್ರೀ ಅನಂತ ಕುಮಾರ್ ಅವರಿಗೆ ಒಂದು ನಿಮಿಷ ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಅರ್ಪಿಸಲಾಯಿತು. ಶ್ರದ್ಧಾಂಜಲಿ ಸಭೆಯನ್ನು ಉದ್ದೇಶಿಸಿ ವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿ ರಮೇಶ ಮಾತನಾಡಿ ಅನಂತ ಕುಮಾರು ಎಬಿವಿಪಿಯ ಮೂಲಕ ಸಾರ್ವಜನಿಕ ಜೀವನಕ್ಕೆ ಬಂದವರು, ಅನಂತರ ಭಾಜಪದಲ್ಲಿ ರಾಜಕೀಯಕ್ಕೆ ಪ್ರವೇಶವನ್ನು ಪಡೆದು ಅವರು ನಿರಂತರವಾಗಿ ಜನಸೇವೆಯನ್ನು ಮಾಡಿದವರು. ಪಕ್ಷಾತೀತವಾಗಿ ದೇಶಕ್ಕೋಸ್ಕರ ಕೆಲಸ ಮಾಡಿದವರು. ನಾನು ಸಂಸದೆಯಾದ ಸಂದರ್ಭದಲ್ಲಿ ಸಂಸತ್‌ನಲ್ಲಿ ಅವರು ರಾಜ್ಯಕ್ಕೆ ಸಂಬಂಧಿಸಿದ ವಿಷಯಗಳ ಕುರಿತಂತೆ ಚರ್ಚೆಯಲ್ಲಿ ಭಾಗವಹಿಸುತ್ತಿದ್ದವರು. ಎಲ್ಲರ ಜೊತೆ ಅನ್ಯೋನ್ಯತೆಯಿಂದ ಇರುತ್ತಿದ್ದರು. ಆದ್ದರಿಂದ ಅವರು ದೇಶಕ್ಕೆ ಮಾದರಿ ರಾಜಕಾರಣಿಯಾಗಿ ಇವತ್ತಿನವರೆಗೆ ಬದುಕಿದರು ಎಂದು ಹೇಳಿದರು.

ಬಡವರ ಬಗ್ಗೆ ಕಾಳಜಿ ಇದ್ದುದರಿಂದ ಪ್ರಧಾನ ಮಂತ್ರಿ ಜನೌಷಧಿ ಮತ್ತು ಬಡ ರೈತರಿಗೆ ರಾಸಾಯನಿಕ ಗೊಬ್ಬರವನ್ನು ಯಾವುದೇ ಗೊಂದಲವಿಲ್ಲದೆ ನೀಡಿದರು ಎಂದು ಸ್ಮರಿಸಿದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬ ವರ್ಗಕ್ಕೆ ದುಖಃವನ್ನು ತಡೆದುಕೊಳ್ಳುವ ಶಕ್ತಿ ಭಗವಂತ ನೀಡಲಿ ಎಂದು ನುಡಿ ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಶಾಲೆ ಮತ್ತು ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಉಪಸ್ಥಿತರಿದ್ದರು. ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಸಿ ನಾಯ್ಕ್, ಆಡಳಿತಾಧಿಕಾರಿ ಬೈಕಾಡಿ ಜನಾರ್ದನ ಆಚಾರ್, ಪ್ರಧಾನ ಸಲಹೆಗಾರ ರಮೇಶ ಕೆ., ಶಕ್ತಿ ಪ. ಪೂ. ಪ್ರಾಂಶುಪಾಲರಾದ ಪ್ರಭಾಕರ ಜಿ.ಎಸ್., ಅಭಿವೃದ್ಧಿ ಅಧಿಕಾರಿ ನಸೀಮ್ ಬಾನು ಉಪಸ್ಥಿತರಿದ್ದರು.